¡Sorpréndeme!

ನನ್ನ ಮೇಲೆ ಕೆಸರು ಎರಚಿದ್ದಕ್ಕೆ ಆಭಾರಿ, ನರೇಂದ್ರ ಮೋದಿ | Oneindia Kannada

2017-11-27 1,541 Dailymotion

ನನ್ನ ಮೇಲೆ ಕೆಸರು ಎರಚಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ಏಕೆಂದರೆ ಕಮಲ ಅರಳುವುದೇ ಕೆಸರಿನಲ್ಲಿ. ಆದ್ದರಿಂದ ಇನ್ನಷ್ಟು ಕೆಸರು ಎರಚಿದರೂ ನಾನು ಬೇಸರ ಪಟ್ಟುಕೊಳ್ಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದರು. ಗುಜರಾತ್ ನ ಭುಜ್ ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಗುಜರಾತ್ ನನ್ನ ಆತ್ಮ ಮತ್ತು ತಾಯಿ. ನಿಮ್ಮೊಂದಿಗಿನ ನನ್ನ ಸಂಬಂಧ ಎಂಥದ್ದು ಅಂದರೆ, ಇಲ್ಲಿ ಸಮಾನತೆ ಇದೆ. ನೀವು ನನ್ನನ್ನು ಸೋದರ ಅಂತ ಕರೆದಿದ್ದೀರಿ ಎಂದರು.ಅಧಿಕಾರಿಗಳು ಕಛ್ ಪ್ರದೇಶಕ್ಕೆ ವರ್ಗಾವಣೆ ಆಗುವುದನ್ನು ಬಯಸಲ್ಲ. ಯಾಕೆಂದರೆ, ಇಲ್ಲಿನ ನೀರಿನ ಬಣ್ಣ ಕಪ್ಪು. ಇನ್ನು ಇಲ್ಲಿಗೆ ನರ್ಮದಾ ನದಿಯ ನೀರು ತರೋಣ ಅಂದರೆ ಕಾಂಗ್ರೆಸ್ ನವರು ಬಿಡುವುದಿಲ್ಲ. ಮೂವತ್ತು ವರ್ಷಗಳ ಹಿಂದೆಯೇ ಇಲ್ಲಿಗೆ ನರ್ಮದಾ ನದಿಯ ನೀರು ಬಂದಿದ್ದರೆ ಏನಾಗಿರುತ್ತಿತ್ತು? ಖಂಡಿತಾ ದೊಡ್ಡ ವ್ಯತ್ಯಾಸ ಆಗಿರುತ್ತಿತ್ತು ಎಂದು ಮೋದಿ ಹೇಳಿದರು.ಕಾಂಗ್ರೆಸ್ ಪಕ್ಷ ಸರ್ದಾರ್ ಪಟೇಲ್ ರನ್ನು ಅವಮಾನಿಸಿತು. ಗುಜರಾತ್ ನ ಜನ ಕ್ಷಮಿಸಿದರು. ಆದರೆ ತಮ್ಮ ಪ್ರತಿಷ್ಠೆ ಮೇಲೆ ಆಗುವ ದಾಳಿಯನ್ನು ಇನ್ನು ಬಹಳ ಕಾಲ ಸಹಿಸುವುದಿಲ್ಲ ಎಂದರು.


I am grateful for all the 'kichad' being thrown at me, after all, a lotus blooms only in 'kichad' so, I don't mind if more is thrown at me, said by PM Narendra Modi in a public meeting in Gujarat.lwatch this video